Saturday, January 29, 2011

ಏನೂ ಹೇಳದ ಆಯೋಗದ ವರದಿ!

ಪಕ್ಷ-ವಿಪಕ್ಷಗಳು ಏನೇನೋ ಹೇಳಿಕೊಳ್ಳುತ್ತಾ ಮಾಮೂಲಿನತೆ ಕೆಸರೆಚಾಡಿಳ್ಳುತ್ತಿವೆ. ಆದರೆ ಮಾಧ್ಯಮ ವರದಿಗಳನ್ನು ನೋಡಿದರೆ, ನ್ಯಾಯಮೂರ್ತಿ ಸೊಮಶೇಖರ್ ಆಯೋಗ, ಚರ್ಚ್‌ಗಳಮೇಲಿನ ದಾಳಿ ಸಂಬಂಧ ಹೇಳಬೇಕಾದ್ದೇನನ್ನೂ ಹೇಳಿದಂತೆಯೇ ಅನಿಸುವುದಿಲ್ಲ! ಅಲ್ಪಸಂಖ್ಯಾತರಲ್ಲಿ ಕಿಚ್ಚೆಬ್ಬಿಸಿ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಸರ‍್ಕಾರದ ವಿರುದ್ಧ ಅವರನ್ನು ಎತ್ತಿಕಟ್ಟುವ ವಿಪಕ್ಷಗಳ ಷಡ್ಯಂತ್ರ ಇದಾಗಿದ್ದರೆ, ಆ ಪಕ್ಷಗಳು, ಹಿಂದೂಗಳ “ಆರ್ಚ್ ರೈವಲ್ಸ್” ಎನ್ನಲಾಗುವ ಮುಸ್ಲಿಂ ತಾಣಗಳನ್ನು ಬಿಟ್ಟು, ಚರ್ಚನ್ನೇ ಪ್ರತ್ಯೇಕಿಸಿ ದಾಳಿಗೆ ಆರಿಸಿಕೊಂಡಿದ್ದೇಕೆ? ಆಯೋಗ ಆ ಪಾಪವನ್ನು ವಿಪಕ್ಷಗಳ ತಲೆಗೆ ಕಟ್ಟಿಲ್ಲ. ಹಾಗಾದರೆ ಇನ್ನಾರು? ಅದು ಹೇಳಿರುವಂತೆ, ‘ನಮ್ಮ “ಹಿಂದೂ” ಸರಕಾರ; ನಮ್ಮನ್ನೇನೂ ಮಾಡುವುದಿಲ್ಲ’ ಎಂಬ ದುರಭಿಮಾನದಲ್ಲಿ, ಮೂಲಭೂತವಾದೀ ಗುಂಪುಗಳು ಈ ಅಧಿಕಪ್ರಸಂಗ ಮಾಡಿದವೇ? ಹಾಗಿದ್ದರೆ ಸರಕಾರಕ್ಕೆ ನಿಜವಾಗಿಯೂ ಅವರ ಬಗ್ಗೆ ಏನೂ ಗೊತ್ತೇ ಇರಲಿಲ್ಲವೇ? ಗೊತ್ತಾಯಿತಲ್ಲಾ, ಆಳುವ ಪಕ್ಷ ಈಗಲಾದರೂ ಆ Elementಗಳನ್ನು ಸಾರ್ವಜನಿಕವಾಗಿ Disownಮಾಡುವ ನೈತಿಕ ಧೈರ್ಯ ಹೊಂದಿಯೇ?
          ಕ್ರಿಶ್ಚಿಯನ್ ಸಂಘಟನೆಗಳು, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಮುಖ್ಯವಾಗಿ ಮಾನಸಿಕ ದುರ‍್ಬಲ ಕುಟುಂಬಗಳಿಗೆ ಆಮಿಷವೊಡ್ಡಿ ತಮ್ಮ ಮತಕ್ಕೆ ಸೇರಿಸಿಕೊಳ್ಳುತ್ತಿರುವ ಸತ್ಯವನ್ನು ಆಯೊಗ ಪತ್ತೆ ಹಚ್ಚಿರುವ ಸಂಗತಿ ಮಾತ್ರಾ ಕಡೆಗಣಿಸುವಂಥದಲ್ಲ. ಆತ್ಮಸಾಕ್ಷಿಯುಳ್ಳ ಸಭ್ಯ, ಸಾತ್ವಿಕ “ಹಿಂದು”ಗಳು ಇದಕ್ಕಾಗಿ ಪ್ರಾಮಾಣಿಕವಾಗಿ ನೊಂದುಕೊಳ್ಳಬೇಕು. ಕೋಪಿಸಿಕೊಂಡು ಹಲ್ಲುಕಡಿದುಕೊಳ್ಳುವ ವಿಚಾರರ ಇದಲ್ಲ. ಆ ಜನ, ಈ ಮುಗ್ಧರಿಗೆ ಮಾಡುತ್ತಿರುವುದು “ಆಧ್ಯಾತ್ಮಿಕ ವಂಚನೆ”, ಇದು! ಆದರೂ ಮಿಷನರಿಗಳೂ, ಇತರರೂ ಯಾವುದೇ ಲೌಕಿಕ, ಐಹಿಕ ಪ್ರಯೋಜನವಿಲ್ಲದೇ ಮತಾಂತರವನ್ನು ಒಂದು ಉದ್ಯಮವಾಗಿ ಏಕಾಗಿ ಕೈಗೊಳ್ಳುತ್ತಾರೆ? ಈ ಒಳಗುಟ್ಟನ್ನು ಸರಕಾರೀ ಆಯೋಗ ಕಂಡುಹಿಡಿದಿಲ್ಲ. ಬಹುಸಂಖ್ಯಾತ ನಿಸ್ಪೃಹರಾದರೂ ಆತ್ಮಸಾಕ್ಷಿಯಿಂದ ಆ ಕೆಲಸ ಮಾಡಬೇಕಲ್ಲವೇ?!

No comments:

Post a Comment