Sunday, September 19, 2010

ಹುಟ್ಟೀತೇ "ಹಿಂದೂ" ಬಹುಮತ "ವೋಟ್ ಬ್ಯಾಂಕ್"?!

        ದೇಶದಲ್ಲಿ ಜಾತಿ ನಾಶವಾಗದು ಎಂಬ ಪೇಜಾವರ ಸ್ವಾಮಿಗಳ ಮಾತು ನಿಜ. ಆದರೆ ಕಿಂಚಿತ್ತಾದರೂ ಅದಾಗುವವರೆಗೆ ದೇಶದಲ್ಲಿ ಹಿಂದೂ ಬಹುಮತ ವೋಟ್‌ಬ್ಯಾಂಕ್ ಸೃಷ್ಟಿಯೂ ಸಾಧ್ಯವಾಗುವುದಿಲ್ಲ! ಸಹಭೋಜನ ಮತ್ತು ದಲಿತ ಉತ್ತರಾಧಿಕಾರಿತ್ವದ ಸವಾಲನ್ನು ಸ್ವಾಮಿಗಳು ಸ್ವೀಕರಿಸಿದ್ದರೂ ಇದಾಗುತ್ತಿರಲಿಲ್ಲ. ಇಂಥದು ಕೇವಲ ಸಾಂಕೇತಿಕ ಪ್ರಕ್ರಿಯೆಯೇ ಧಾರ್ಮಿಕವಾದ್ದೆನು ಅಲ್ಲ. ಹಿಂದೂಧರ್ಮವೆಂಬ ವೈದಿಕ ಸಂಪ್ರದಾಯ-ಜಿಜ್ಞಾಸೆಗಳಿರುವುದು ಪ್ರಸ್ಥಾನತ್ರಯ, ಭಾಷ್ಯ, ಸೂತ್ರ ಇತ್ಯಾದಿ ವಾಙ್ಮಯದಲ್ಲಿ. ಅದು ಎಂದಿಗೂ ಬಲ್ಲ ಬ್ರಾಹ್ಮಣವರ್ಗದ ಸ್ವತ್ತೇ ಹೊರತು ಇತರಜಾತಿಗಳವರಿಗೆ ಇದರ ಅಧಿಕಾರ ಇರಲೇ ಇಲ್ಲ. ಆ ನಿರ್ಜೀವ ಅಕ್ಷರಗಳಿಗೆ ಜೀವ, ಭಾವ, ಅನುಭಾವಗಳನ್ನು ತುಂಬಿ ಎಲ್ಲರೊಡನೆ ಹಂಚಿಕೊಳ್ಳುವ ಮಾನವೀಯ ಪ್ರಯತ್ನ, ಬಸವಣ್ಣ, ರಾಮಾನುಜಾಚಾರ‍್ಯ, ಇನ್ನಿತರ ಹಾರವ ಹರಿದಾಸರಿಂದ ನಡೆಯಿತಾದರೂ ಅವರ ಅಸ್ತಿತ್ವವನ್ನೇ ಪಟ್ಟಭದ್ರ,  ಪಾಷಂಡ ವೇದಾಂತಿಗಳು ಯಶಸ್ವಿಯಾಗಿ ಫಲ್ಟರ್ ಮಾಡಿಬಿಟ್ಟಿರುವುದು ವಿದ್ಯಮಾನ. ಇಂಥಾ ವಾಗ್ಪಂಡಿತೋತ್ತಮರು, ಅಲ್ಲಾಹನೊಬ್ಬನೇ ಸರ‍್ವಸ್ವ ಎಂಬ ಹರಿಸರ್ವೋತ್ತಮತ್ವವನ್ನೇ ಮೂಲಭೂತವಾಗಿ ಬೋಧಿಸುವ ಶರಣಾಗತಿಯ ಇಸ್ಸಲಾಂ ವನ್ನಾಗಲೀ, ಕರುಣೆ-ಕೃತಜ್ಞತೆಗಳ ಕಿಲಿಸ್ತಾನವನ್ನಾಗಲೀ ಅರಿತುಕೊಳ್ಳುವುದು ಸಾಧ್ಯವೇ? ಹೀಗೆ  ಹಿಂದೂ ಎನ್ನುವುದು ಧರ್ಮವಾಗಿ, ದಲಿತಾತಿ ದಲಿತರೂ ಸೇರಿದಂತೆ ಎಲ್ಲರನ್ನೂ ಒಗ್ಗೂಡಿಸಿಕೊಳ್ಳುವ ವ್ಯವಸ್ಥೆಯಾಗಲಿಲ್ಲ. ಬದಲಿಗೆ, ಸಂಸ್ಕಾರವಿಲ್ಲದೆ ಕೃತಕವಾಗಿ ಬದುಕುವ ಕಚ್ಚಾ ರಾಜಕಾರಣಿಗಳ ವೋಟ್‌ಬ್ಯಾಂಕ್ ಉದ್ದೇಶದ ನುಡಿಕಟ್ಟಾಗಿದೆ! ಹುಟ್ಟಿತೇ ಈ ವೋಟ್‌ಬ್ಯಾಂಕ್?!
ಆರ್. ಕೆ. ದಿವಾಕರ